ಸೌರ ಸ್ಥಿರಾಂಕ

	ಸೂರ್ಯನಿಂದ 1 ಖಮಾ ದೂರದಲ್ಲಿ 1 ಚ.ಕಿಮೀ ಪ್ರದೇಶ 1 ಸೆಕೆಂಡಿನಲ್ಲಿ ಪಡೆಯುವ ವಿಕಿರಣ (ಸೋಲಾರ್ ಕಾನ್‍ಸ್ಟೆಂಟ್). ಇದರ ಮೊತ್ತ ಸು. 4,000 ಮೆಗಾವಾಟ್‍ಗಳು. ಇದರಿಂದ ಸಣ್ಣ ಪಟ್ಟಣವೊಂದಕ್ಕೆ ಅಗತ್ಯವಾದ ಶಾಖ ಮತ್ತು ಬೆಳಕನ್ನು ಪೂರ್ಣವಾಗಿ ಒದಗಿಸಬಹುದು. ಸೌರಶಕ್ತಿಯನ್ನು ಕಾರ್ಯೋಪಯೋಗಿ ತರಲ (ಫ್ಲೂಯ್ಡ್) ಬಳಸಿಕೊಂಡು ಉಷ್ಣಶಕ್ತಿಯಾಗಿ,  ಫೆÇೀಟೊವೋಲ್ಟಾಯಿಕ್ ಕೋಶ ಬಳಸಿಕೊಂಡು ವಿದ್ಯುಚ್ಛಕ್ತಿ ಯಾಗಿ, ವಿಕಿರಣಸಂಮರ್ದ ಬಳಸಿಕೊಂಡು ಯಾಂತ್ರಿಕಶಕ್ತಿಯಾಗಿ (ಅಂತರಿಕ್ಷ ದಲ್ಲಿ ಸೌರ ನೌಕಾಯನ) ಹಾಗೂ ದ್ಯುತಿಸಂಶ್ಲೇಷಣೆಯ ಮೂಲಕ ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸಬಹುದು.

	ಸೂರ್ಯನ ಹುಟ್ಟು ಮತ್ತು ಸಾವು: ಮೂಲಕಣಗಳ ಅತಿಲಂಬಿತ ಮತ್ತು ವಿಸ್ತೃತ ಮೇಘಕ್ಕೆ ನೀಹಾರಿಕೆ (ನೋಡಿ- ನೀಹಾರಿಕೆ) ಎಂದು ಹೆಸರು. ಅಸಂಖ್ಯ ನೀಹಾರಿಕೆಗಳ ಮೊತ್ತ, ವಿಶ್ವ (ನೋಡಿ- ವಿಶ್ವ). ಇವು ಅವ್ಯಕ್ತ ಕೇಂದ್ರವೊಂದರಲ್ಲಿ ಸಂಘನಿತವಾಗಿದ್ದುವು. ಸು. 15,000,000,000 ವರ್ಷಗಳ ಹಿಂದೆ ಹಠಾತ್ತನೆ ಸಂಭವಿಸಿದ ಆಸ್ಫೋಟನೆಯಲ್ಲಿ ಇವು ಹೋಳು ಹೋಳಾಗಿ ಯದ್ವಾತದ್ವಾ ಎಲ್ಲೆಡೆಗಳಿಗೆ ಎರಚಲ್ಪಟ್ಟವು. ಆ ಆದಿಮ ಆಸ್ಫೋಟನೆಗೆ ಮಹಾಬಾಜಣೆ ಎಂದು ಹೆಸರು. ಎಂದೇ ನೀಹಾರಿಕೆಗಳು ವಿವಿಧ ವಿಸ್ತಾರ ಮತ್ತು ಆಕಾರಗಳವು ಮಳೆಗಾಲದ ಮೊದಲು ದಟ್ಟಯಿಸುವ ಕಾರ್ಮುಗಿಲುಗಳ ಸಮೂಹದಂತೆ. ಪ್ರತಿಯೊಂದು ನೀಹಾರಿಕೆಗೆ ಜನ್ಮತಃ ಎರಡು ಏಕಕಾಲಿಕ ಚಲನೆಗಳು ಪ್ರಾಪ್ತವಾಗಿವೆ: ಪರಸ್ಪರ ದೂರ ದೂರ ವಿವಿಧ ದಿಶೆಗಳಿಗೆ ಸರಿತ ಇದು ಸ್ಥಾನಾಂತರಣ (ಟ್ರ್ಯಾನ್‍ಸ್ಲೇಶನ್), ತನ್ನ ಸುತ್ತ ತಾನೇ ಬುಗರಿಯಂತೆ ಗಿರಕಿಸುವುದು ಇದು ಆವರ್ತನೆ (ರೊಟೇಶನ್).

	ಸ್ಥಾನಾಂತರಣದ ಕಾರಣವಾಗಿ ವಿಶ್ವ ವ್ಯಾಕೋಚಿಸುತ್ತಿದೆ, ಆವರ್ತನೆಯ ಕಾರಣವಾಗಿ ನೀಹಾರಿಕೆಯ ಒಡಲಿನಲ್ಲಿ ಮೂಲಕಣಗಳು ವಿವಿಧ ಗಾತ್ರ-ರಾಶಿ ಸಂಖ್ಯೆಗಳಲ್ಲಿ ಮುದ್ದೆಗೂಡುತ್ತವೆ. ಪ್ರತಿಯೊಂದು ಮುದ್ದೆಯೂ ಭಾವೀ ನಕ್ಷತ್ರವಾಗುವ ಸಂಭಾವ್ಯತೆ ಇದೆ. ಆದಿಮ ಸೂರ್ಯ ಮೈದಳೆದ ನೀಹಾರಿಕೆಗೆ ಸೌರ ನೀಹಾರಿಕೆ ಎಂದು ಹೆಸರು. ಸೂರ್ಯನ ಸಂಗಾತಿ ತಾರೆಗಳೂ ಇದೂ ಸೇರಿರುವ ಹರವನ್ನು ಆಕಾಶಗಂಗೆ (ನೋಡಿ- ಆಕಾಶಗಂಗೆ) ಎಂದು ಗುರುತಿಸುತ್ತೇವೆ.

	ರಾಶಿ-ಗುರುತ್ವ ಅನ್ಯೋನ್ಯಾಶ್ರಯಿಗಳು ಒಂದಿಲ್ಲದೆ ಇನ್ನೊಂದಿಲ್ಲ. ಆದಿಮ ಸೂರ್ಯನಲ್ಲಿ (ಮುದ್ದೆ) ನಿಹಿತವಾಗಿದ್ದ ಅಗಾಧ ರಾಶಿಯ ಗುರುತ್ವದ ಕಾರಣವಾಗಿ ಸೂರ್ಯಗಾತ್ರ ಕೇಂದ್ರಾಭಿಮುಖವಾಗಿ ಸಂಕೋಚಿಸತೊಡಗಿತು. ಗರ್ಭದಲ್ಲಿ ಸಂಮರ್ದ ತಾರಕ್ಕೇರಿ ಉಷ್ಣ ಸಂಜನಿಸಿ ಬೈಜಿಕ ಸಂಲಯನ ಕ್ರಿಯೆಗಳು ಆರಂಭವಾದುವು. ಹೀಗೆ ಸುಮಾರು 5x109 ವರ್ಷ ಪ್ರಾಚೀನದಲ್ಲಿ ಸೂರ್ಯನ ಜನನವಾಯಿತು (ನೋಡಿ- ಸೌರವ್ಯೂಹ). ಇನ್ನೂ ಸುಮಾರು 7x109 ವರ್ಷಗಳು ಸಲ್ಲುವಾಗ ಸೂರ್ಯನಲ್ಲಿರುವ ಹೈಡ್ರೊಜನ್ ಇಂಧನ ಖಾಲಿಯಾಗಿರುತ್ತದೆ ಮತ್ತು ಆ ಸ್ಥಾನವನ್ನು ಹೀಲಿಯಮ್ ಭರ್ತಿಮಾಡಿರುತ್ತದೆ. ಸೂರ್ಯನ (ಯಾವುದೇ ನಕ್ಷತ್ರದ) ಮೂರನೆಯ ವಿಕಾಸಹಂತವಿದು: ಆದಿಮ ನಕ್ಷತ್ರ, ಹೈಡ್ರೊಜನ್ (ಇಂಧನ ಇದರ ಬೀಜಗಳಾದುದರಿಂದ) ನಕ್ಷತ್ರ, ಹೀಲಿಯಮ್ ನಕ್ಷತ್ರ. 

	ರಕ್ತದೈತ್ಯ ಸೂರ್ಯನಲ್ಲಿ ಮತ್ತೆ ಗುರುತ್ವಗುಣ ಕಾರ್ಯಶೀಲವಾಗು ತ್ತದೆ. ಈಗ ಬೈಜಿಕ ಸಂಲಯನ ಕ್ರಿಯೆಗಳಿಗೆ ಇಂಧನ ಹೀಲಿಯಮ್, ಫಲ ವಿಕಿರಣ. ಇದು ಆಕಾಶಕ್ಕೆ ಸೋರಿಹೋಗುವುದು. ಇಲ್ಲಿಯ ಬೂದಿ ಕಾರ್ಬನ್.

	ನಾಲ್ಕನೆಯದು ಕಾರ್ಬನ್ ಹಂತ. ಇದರಲ್ಲಿ ಗುರುತ್ವ ಸಂಕೋಚನ ಕ್ರಿಯೆ ಸಾಕಷ್ಟು ಪ್ರಬಲವಾಗಿರದು. ಹೀಗಾಗಿ ಗರ್ಭದಲ್ಲಿ ಕಾರ್ಬನ್ ಇಂಧನವಾಗುವ ಬೈಜಿಕ ಸಂಲಯನ ಕ್ರಿಯೆಗಳು ಕುದುರುವುದಿಲ್ಲ. ನಕ್ಷತ್ರ ಗಾತ್ರ ಅತಿಶಯವಾಗಿ ಕುಗ್ಗುವುದು. 
(ನೋಡಿ- ಶ್ವೇತಕುಬ್ಜ)

	ಶ್ವೇತಕುಬ್ಜವಾಗುವ ಸೂರ್ಯ ಮುಂದೆ ವಿಕಿರಣನಷ್ಟದಿಂದ ನಂದುತ್ತದೆ ಅಥವಾ ನೋವಾ ನಕ್ಷತ್ರವಾಗಿ (ನೋಡಿ- ಸೂಪರ್ನೋವಾ) ನಾಶವಾಗುತ್ತದೆ.

	ನವಗ್ರಹಗಳ ಸಾಲಿನಲ್ಲಿ ಸೂರ್ಯ: ಪ್ರಾಚೀನ ಭಾರತೀಯ ನಂಬಿಕೆ ಪ್ರಕಾರ ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಇವು ನವಗ್ರಹಗಳು (ನೋಡಿ- ನವಗ್ರಹ-ಪೂಜೆ,-ಹೋಮ). ಕೊಪರ್ನಿಕಸ್ ಕ್ರಾಂತಿಯ ಅನಂತರ (15-16ನೆಯ ಶತಮಾನ) ನವಗ್ರಹಗಳಿಗೆ ಅಸ್ತಿತ್ವವೇ ಇಲ್ಲವಾಗಿದೆ.			
					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ